Friday, February 12, 2010
ಪ್ರೇಮಿಗಳ ದಿನಕ್ಕಾಗಿ ಇಲ್ಲಿದೆ ನಿಮ್ಮ 'ಪ್ರೇಮ ಭವಿಷ್ಯ'
ಪ್ರೇಮಿಗಳ ದಿನ ಬಂದೇ ಬಿಟ್ಟಿದೆ. ಪ್ರೇಮಿಗಳಿಗೆ ತಮ್ಮ ಪ್ರೇಮದ ಸಂತಸ ಅನುಭವಿಸುವ ಗಳಿಗೆ ಪ್ರತಿ ದಿನದ ಪ್ರತಿ ನಿಮಿಷವಿದ್ದರೂ, ಪ್ರೇಮಿಗಳ ದಿನ ಬಂದಾಕ್ಷಣ ಅದೆಂಥದ್ದೋ ಹೊಸತನ ಇದ್ದೇ ಇರುತ್ತದೆ. ಆದರೂ ಭವಿಷ್ಯದ ಬಗ್ಗೆ ಕೊಂಚ ಹೆದರಿಕೆಯೂ ಇಲ್ಲದೆ ಇರೋದಿಲ್ಲ. ಹಾಗಾದರೆ ನೀವು ಆರಿಸಬಹುದಾದ ಬಾಳ ಸಂಗಾತಿ ಯಾವ ರಾಶಿಯವರಾಗಿದ್ದರೆ ಒಳ್ಳೆಯದು ಹಾಗೂ ನಿಮ್ಮ ಪ್ರೇಮ ಜೀವನ ಹೇಗಿರಬಹುದೆಂದು ನೀವೇ ನೋಡಿ.
ಮೇಷ: ಉಪಯುಕ್ತ ಹಾಗೂ ಸಹಕಾರ ಮನೋಭಾವ ಹೊಂದಿರುವವರ ಜೊತೆ ಮಾತ್ರ ಮೇಷ ರಾಶಿಯವರು ಬೆರೆಯುತ್ತಾರೆ. ಹೀಗಾಗಿ ಈ ರಾಶಿಯವರಿಗೆ ಸರಿಯಾಗಿ ಹೊಂದುವುದು ಸಿಂಹ ಹಾಗೂ ಧನು ರಾಶಿಯವರ ಜೊತೆಗೆ. ಸ್ವಲ್ಪ ಅಹಂ, ಇಗೋಗಳನ್ನು ಬಿಟ್ಟರೆ ಮೇಷ ಹಾಗೂ ಸಿಂಹ ರಾಶಿಯ ಜೋಡಿ ತುಂಬ ಚೆನ್ನಾಗಿರುತ್ತದೆ. ಮೇಷ ಹಾಗೂ ಮಿಥುನ ರಾಶಿಯವರ ನಡುವಿನ ಹೊಂದಾಣಿಕೆ ಆರಂಭದಲ್ಲಿ ಅದ್ಭುತವಾಗಿ ಇದ್ದರೂ, ನಿಧಾನವಾಗಿ ಆ ಹೊಂದಾಣಿಕೆ ಕಡಿಮೆಯಾಗುವ ಸಂಭವ ಹೆಚ್ಚು. ಮೇಷ ಹಾಗೂ ತುಲಾ ರಾಶಿಯವರ ನಡುವಿನ ಹೊಂದಾಣಿಕ ಸ್ವಲ್ಪ ಸಂದಿಗ್ಧವಾದುದು. ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ನಂಬಿಕೆ ಹೊಂದಾಣಿಕೆ ಇದ್ದಲ್ಲಿ ಮಾತ್ರ ಸಂಬಂಧ ಸರಿಯಾಗಿದ್ದೀತು. ಮೇಷ ಹಾಗೂ ವೃಶ್ಚಿಕ ರಾಶಿಯ ಮಂದಿಯ ಸಂಬಂಧವೂ ಕಷ್ಟವೇ. ಮೇಷ ರಾಶಿಯವರೇ ಕೊಂಚ ತಮ್ಮ ಉದ್ರೇಕಕಾರಿ ನಡವಳಿಕೆ ಹಾಗೂ ದರ್ಪದ ಧೋರಣೆ ಬಿಟ್ಟರೆ, ಅವರು ಇತರ ಯಾವುದೇ ರಾಶಿಯ ಸಂಗಾತಿಯೊಡನೆಯೂ ಖಷಿಯಿಂದಿರಬಹುದು. ಆದರೆ ಖುಷಿಯ ಜೀವನ ರೂಢಿಸಿಕೊಳ್ಳುವುದು ಮೇಷ ರಾಶಿಯವರ ಕೈಯಲ್ಲೇ ಇದೆ.
ವೃಷಭ: ವೃಷಭ ರಾಶಿಯವರು ಮಕರ ಹಾಗೂ ಕನ್ಯಾ ರಾಶಿಯ ಮಂದಿಯೊಂದಿಗೆ ಸುಮಧುವ ಬಾಳ್ವೆ ನಡೆಸಬಲ್ಲರು. ಉತ್ತಮ ಸಂಬಂಧ ಹೊಂದಬಲ್ಲರು. ಮಕರ ರಾಶಿಯವರು ತಮ್ಮನ್ನು ಇನ್ನೊಬ್ಬರು ಡಾಮಿನೇಟ್ ಮಾಡುವುದನ್ನು ಸಹಿಸಲಾರದಿರುವವರು ಹಾಗೂ ಕನ್ಯಾ ರಾಶಿಯವರು ಕೊಂಚ ಟೀಕೆ ಮಾಡುವುದರಲ್ಲಿ ಎತ್ತಿದ ಕೈಯವರಾಗಿರುವುದರಿಂದ ವೃಷಭ ರಾಶಿಯ ಮಂದಿ ಈ ವಿಚಾರದಲ್ಲಿ ಕೊಂಚ ಜಾಗರೂಕರಾಗಿರಬೇಕು. ಅದರಲ್ಲೂ ವೃಷಭ ಹಾಗೂ ವೃಶ್ಚಿಕ ರಾಶಿಯ ಮಂದಿಯ ಬಾಳು ತುಂಬ ಚೆನ್ನಾಗಿರುತ್ತದೆ. ಈ ಇಬ್ಬರಲ್ಲೂ ಒಂದು ಭಾವುಕ ಬೆಸುಗೆ ಜೀವನವಿಡೀ ಬಂಧಿಸುತ್ತದೆ. ಹಾಗಾಗಿ ಸುಖಸಂಸಾರ ಸಾಧ್ಯವಾಗುತ್ತದೆ. ವೃಷಭ ಹಾಗೂ ಕರ್ಕ ರಾಶಿಯ ಮಂದಿಗೆ ಮೊದಲು ಸ್ವಲ್ಪ ಹೊಂದಾಣಿಕೆಯಲ್ಲಿ ಕಷ್ಟವಾದರೂ, ಇಬ್ಬರೂ ಪ್ರಯತ್ನ ಪಟ್ಟರೆ ಅದ್ಭುತ ಹೊಂದಾಣಿಕೆ ಸಾಧ್ಯವಿದೆ. ವೃಷಭ ಹಾಗೂ ಸಿಂಹ ರಾಶಿಯ ಮಂದಿಯ ಸಂಬಂಧವೂ ಚೆನ್ನಾಗಿರುತ್ತದೆ. ತಮ್ಮ ತಮ್ಮ ಒಳಿತುಕೆಡುಕುಗಳ ಬಗ್ಗೆ ಇವರಿಗೆ ಅರಿವಿರುವುದರಿಂದ ಸಂಬಂಧ ಸುಗಮವಾಗುತ್ತದೆ. ಕುಂಭ ರಾಶಿಯ ಮಂದಿಯ ಜೊತೆಗೂ ವೃಷಭ ರಾಶಿಯವರಿಗೆ ಉತ್ತಮ ಜೀವನ ಸಾಧ್ಯವಿದೆ.
ಮಿಥುನ: ಬುದ್ಧಿವಂತರಾಗಿರುವ ಮಿಥುನ ರಾಶಿಯವರು ತಮಾಷೆಯ ಮನೋಭಾವ ಹೊಂದಿದ್ದರೂ, ಯಾವಾಗಲೂ ಕನ್‌ಫ್ಯೂಸ್ ಆಗೋದು ಹೆಚ್ಚು. ಬಹುಬೇಗ ಮೂಡ್ ಕಳೆದುಕೊಳ್ಳುವ, ಬೋರ್ ಆಘುವ ವ್ಯಕ್ತಿತ್ವ ಹೊಂದಿರುವ ಇವರು ಸ್ವಲ್ಪ ಭಾವುಕರು. ಇತರರ ನೋವು ಕಂಡು ಬಹುಬೇಗನೆ ಕರಗಿಬಿಡುವ ಇವರಿಗೆ ತುಲಾ, ಕುಂಭ ರಾಶಿಯ ಮಂದಿಯೊಂದಿಗಿನ ಸಹವಾಸ ಹಿಡಿಸುತ್ತದೆ. ಈ ಇಬ್ಬರು ಜೋಡಿಗಳ ನಡುವಿನ ಭಾವನಾತ್ಮಕ ಹಾಗೂ ದೈಹಿಕ ಸಂಬಂಧ ಚೆನ್ನಾಗಿರುತ್ತದೆ. ಈ ಇಬ್ಬರೂ ತಮ್ಮ ಬೌದ್ಧಿಕ ಜೀವನವನ್ನೂ ಉತ್ತಮವಾಗಿ ಅನುಭವಿಸಬಲ್ಲರು. ವೃಷಭ ಹಾಗೂ ಮೇಷ ರಾಶಿಯವರ ನಡುವಿನ ಸಂಬಂಧವೂ ತುಂಬ ಬೋರಿಂಗ್ ಆಗಿರದಿದ್ದರೂ, ಬಹುಕಾಲ ಬಾಳಿಕೆ ಬರುವ ಸಂಬಂಧ ಇವರದಲ್ಲ. ಭಿನ್ನಾಭಿಪ್ರಾಯದ ಕಾರಣ ಇವರಲ್ಲಿ ಒಡಕು ಮೂಡುವ ಸಂಭವವಿದೆ. ಮೀನ ರಾಶಿಯವರು ಹೊಂದಿಕೆ ಮಾಡಿಕೊಳ್ಳುವ ವ್ಯಕ್ತಿತ್ವ ಹೊಂದಿರುವುದರಿಂದ ನಿಧಾನವಾಗಿ ಮಿಥುನ ರಾಶಿಯವರ ಜೊತೆ ಹೊಂದಾಣಿಕೆ ಮಾಡಬಲ್ಲರು. ಧನು ರಾಶಿಯವರು ಕೂಡ ಮಿಥುನ ರಾಶಿಯವರಂತೆ ಬುದ್ಧಿವಂತರಾಗಿರುವುದರಿಂದ ಬಹುಬೇಗನೆ ಮಿಥುನ ರಾಶಿಯವರ ಗಮನ ಸೆಳೆದು, ಉತ್ತಮ ಸಂಬಂಧ ಸಾಧಿಸಬಲ್ಲರು.
ಕರ್ಕ: ಕರ್ಕ ರಾಶಿಯವರು ಕೆಲವೊಮ್ಮೆ ಸ್ವಲ್ಪ ನಾಚಿಕೆಯ ವ್ಯಕ್ತಿತ್ವದವರಾದರೂ, ಸ್ವಲ್ಪವೇ ಹೊತ್ತಿನಲ್ಲಿ ಎಲ್ಲರೂ ತಮ್ಮತ್ತ ದೃಷ್ಟಿಸುವಂತೆ ವ್ಯಕ್ತಿತ್ವ ಹೊಂದುವ ಶಕ್ತಿಯೂ ಅವರಲ್ಲಿದೆ. ತಮ್ಮ ಕುಟುಂಬದ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಕರ್ಕ ರಾಶಿಯ ಮಂದಿ ವೃಶ್ಚಿಕ ಹಾಗೂ ಮೀನ ರಾಶಿಯ ಮಂದಿಯ ಜೊತೆಗೆ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ವೃಶ್ಚಿಕ ರಾಶಿಯ ಮಂದಿ ಕರ್ಕ ರಾಶಿಯ ಮಂದಿಯ ಜೊತೆಗೆ ತುಂಬ ಸಂಶಯಾಸ್ಪದವಾಗಿ ವ್ಯವಹರಿಸದಿರುವುದರಿಂದ ಈ ಸಂಬಂಧ ಚೆನ್ನಾಗಿರುತ್ತದೆ. ಮೀನ ರಾಶಿಯ ಮಂದಿಯೂ ಕರ್ಕದ ಮಂದಿಯ ಜೊತೆಗೆ ಉತ್ತಮ ಸಂಬಂಧ ಹೊಂದುತ್ತಾರೆ. ಕರ್ಕ ಹಾಗೂ ಕನ್ಯಾ ರಾಶಿಯ ಸಂಬಂಧವೂ ಅಷ್ಟೆ, ಉತ್ತಮವಾಗಿರಬಲ್ಲುದು. ಇವರಿಬ್ಬರು ಪರಸ್ಪರ ಸಹೃದಯತೆ ಒಬ್ಬರನ್ನೊಬ್ಬರು ಅತ್ಯುತ್ತಮವಾಗಿ ಅರ್ಥಮಾಡಿಕೊಳ್ಳಬಲ್ಲವರಾದ್ದರಿಂದ ಸುಖ ದಾಂಪತ್ಯ ಸಾಧ್ಯ. ತುಲಾ ಹಾಗೂ ಮೇಷ ರಾಶಿಯ ಮಂದಿಯೂ ಕೂಡ ಕರ್ಕ ರಾಶಿಯ ಮಂದಿ ಜೊತೆ ಹೊಂದಿಕೊಳ್ಳಬಲ್ಲರು.
ಸಿಂಹ- ತಾವು ಗುಂಪಿನಲ್ಲಿ ಪ್ರತ್ಯೇಕವಾಗಿ ಗುರುತಿಸಿಕೊಳ್ಳಬೇಕೆಂಬುದು ಇವರ ಸ್ವಭಾವವಾದ್ದರಿಂದ ಅವರು ಯಾವತ್ತೂ ಡಿಫರೆಂಟ್ ಆಗಿ ಜೀವಿಸಲು ಬಯಸುತ್ತಾರೆ. ಸ್ವಲ್ಪ ಡಾಮಿನೇಟ್ ವ್ಯಕ್ತಿತ್ವ ಹೊಂಮದಿರುವ ಇವರು ಸುಲಭವಾಗಿ ಬೇಸರಕ್ಕೆ ಒಳಗಾಗಬಲ್ಲರು. ಹೀಗಾಗಿ ಸಿಂಹ ರಾಶಿಯ ಮಂದಿಗೆ ಸೂಕ್ತವಾಗಿ ಹೊಂದಿಕೊಳ್ಳಬಲ್ಲವರು ಮೇಷ ಹಾಗೂ ಧನು ರಾಶಿಯವರು. ಮೇಷ ಹಾಗೂ ಸಿಂಹ ರಾಶಿಯವರ ನಡುವಿನ ಸಂಬಂಧ ಕೊಂಚ ತೊಂದರೆಗಳನ್ನು ಸೃಷ್ಟಿಸಬಹುದು ಹಾಗೂ ತಮ್ಮ ಸಂಬಂಧದಲ್ಲಿ ಇಬ್ಬರಿಗೂ ವಿರಸವುಂಟಾಗುವ ಸಾಧ್ಯತೆ ಬರಬಹುದು. ಆದರೆ ಸಿಂಹ ಹಾಗೂ ಧನು ರಾಶಿಯ ಮಂದಿಯ ಸಂಬಂಧ ಬಹುಕಾಲ ಬಾಳಿಕೆ ಬರುವಂಥದ್ದು. ಸಿಂಹ ಹಾಗೂ ವೃಷಭ ರಾಶಿಯ ಮಂದಿ ಯಾವಾಗಲೂ ಪರಸ್ಪರ ಕಚ್ಚಾಡಿಕೊಳ್ಳಬಹುದು. ಹಾಗಾಗಿ ಇವರ ಸಂಬಂಧ ಕಷ್ಟ ಸಾಧ್ಯ. ಸಿಂಹ ಹಾಗೂ ಧನು ರಾಶಿಯವ ಸಂಬಂಧದಲ್ಲಿ ಯಾವಾಗಲೂ ಉತ್ಸಾಹ, ಒಂದು ಬೆಚ್ಚಗಿನ ಪ್ರೀತಿ ವಾತ್ಸಲ್ಯ, ಆಳವಾದ ನಂಬಿಕೆ ಇವೆಲ್ಲವೂ ಸಾಧ್ಯವಿದೆ. ಸಿಂಹ ಹಾಗೂ ವೃಶ್ಚಿಕ ರಾಶಿಯ ಮಂದಿ ಪರಸ್ಪರ ತಮ್ಮೊಳಗೆ ಗೌರವ ನೀಡುವ ಜೊತೆಗೆ ಸಂಬಂಧವನ್ನು ಗಟ್ಟಿಯಾಗಿ ಕಾಪಾಡಬಲ್ಲ ನಿಪುಣತೆ ಸಾಧ್ಯವಿದೆ.
ಕನ್ಯಾ- ಕನ್ಯಾ ರಾಶಿಯ ಮಂದಿ ತಮ್ಮನ್ನು ತಾವು ಸಾಮಾಜಿಕ ಸ್ತರದಲ್ಲಿ ಗುರುತಿಸಿಕೊಳ್ಳುವುದನ್ನು ಅಷ್ಟಾಗಿ ಇಷ್ಟಪಡುವುದಿಲ್ಲವಾದ್ದರಿಂದ ಸಾಮಾಜಿಕವಾಗಿ ಕಾಣಿಸಿಕೊಳ್ಳುವುದೂ ಕಡಿಮೆ. ಪಕ್ಕಾ ಪರ್ಫೆಕ್ಷನಿಸ್ಟ್‌ಗಳಾಗಿರುವ ಇವರು, ತಪ್ಪುಗಳನ್ನು ಸಹಿಸುವುದಿಲ್ಲ. ಹೊರಗಡೆಯಿಂದ ಕೂಲ್ ಆಗಿ ಕಾಣುವ ಇವರು ಒಳಗಿನಿಂದ ಎಲ್ಲರಂತೆ ಕುತೂಹಲಿಗಳಾಗಿರುತ್ತಾರೆ. ವೃಷಭ ಹಾಗೂ ಮಕರ ರಾಶಿಯ ಮಂದಿಯ ಜೊತೆಗೆ ಇವರು ಸುಲಭವಾಗಿ ಹೊಂದಿಕೊಳ್ಳುತ್ತಾರೆ. ವೃಷಭ ಹಾಗೂ ಮಕರ ರಾಶಿಯ ಮಂದಿ ಯಾವಾಗಲೂ ಕನ್ಯಾ ರಾಶಿಯ ಮಂದಿಗೆ ಉತ್ತಮ ಸಪೋರ್ಟ್ ನೀಡುತ್ತಾರೆ. ಇವರ ಸಂಬಂಧ ಪರಸ್ಪರ ಸಹಕಾರಿಯಾಗಿ ಸಹಬಾಳ್ವೆ ನಡೆಸಬಲ್ಲರು. ತುಂಬ ಶಾಂತಿಯುತವಾಗಿ ಕೆಲಸ ಮಾಡುವ ಕನ್ಯಾ ರಾಶಿಯ ಮಂದಿಗೆ ಕರ್ಕ ರಾಶಿಯ ಮಂದಿಯ ಜೊತೆ ಹೊಂದಿಕೆ ಸ್ವಲ್ಪ ಕಷ್ಟವಾದರೂ, ಈ ಇಬ್ಬರೂ ಜೊತೆ ಸೇರಿದರೆ, ತಮ್ಮ ತೊಂದರೆಗಳನ್ನು ತಾವೇ ನಿವಾರಿಸುವಲ್ಲಿ ಸಿದ್ಧಹಸ್ತರು. ಮೀನ ರಾಶಿಯ ಮಂದಿಯೂ ಕನ್ಯಾ ರಾಶಿಯ ಮಂದಿಗೆ ಉತ್ತಮ ಸಂಗಾತಿಯಾಗಬಲ್ಲರು. ಈ ಇಬ್ಬರೂ ಒಂದು ದಿವ್ಯವಾದ ಭಾವುಕ ಸಂಬಂಧ ಹೊಂದಿರುವವರಾಗಿದ್ದು, ಕೆಲವೊಮ್ಮೆ ಈ ಭಾವುಕತೆಯೇ ಇಬ್ಬರಲ್ಲೂ ನಿರಾಸೆಯನ್ನೂ ಹತಾಶೆಯನ್ನೂ ತರಬಹುದು. ಆದಾಗ್ಯೂ ಇವರ ಸಂಬಂಧ ಬಹುಕಾಲ ಬಾಳಬಲ್ಲುದು.
ತುಲಾ- ತುಲಾ ರಾಶಿಯ ಮಂದಿ ತುಂಬ ವಿವೇಕಿಗಳು. ಅವಿಧೇಯತೆ, ಸತ್ಯಕ್ಕೆ ಬೆಣ್ಣೆ ಸವರಿ ಹೇಳುವುದು ಇವ್ಲೆಲವೂ ಇವರಿಗೆ ಇಷ್ಟವಾಗುವುದಿಲ್ಲ. ಚರ್ಚೆ ಇವರಿಗೆ ಪ್ರಿಯವಾದ ಹವ್ಯಾಸ. ಆದರೆ ಜಗಳವಾದರೆ ತಾವೇ ಅದನ್ನು ಸರಿಪಡಿಸಬಲ್ಲರು. ಹಾಗಾಗಿ ಇವರ ವಿವೇಕಕ್ಕೆ ಸರಿಹೊಂದಬಲ್ಲ ಸಂಗಾತಿಯಾಗಲು ಮಿಥುನ ಹಾಗೂ ಕುಂಭ ರಾಶಿಯವರು ಸೂಕ್ತ. ತುಲಾ ರಾಶಿಯವರು ಯಾವಾಗಲೂ ತಮ್ಮ ಸಂಗಾತಿಯ ಮೇಲೆ ಸಂದೇಹ ಹೊಂದಿರುವ ಸಂಭವ ಹೆಚ್ಚಿರುವುದರಿಂದ, ಇದು ಮಿಥುನ ರಾಶಿಯವರಿಗೆ ಕೆಲವೊಮ್ಮೆ ಇಷ್ಟವಾಗದಿರಲೂಬಹುದು. ಆದರೆ ಮಿಥುನ ಹಾಗೂ ಕುಂಭ ರಾಶಿಯವರಿಬ್ಬರೂ ತುಂಬ ಆಕ್ಟಿವ್ ಹಾಗೂ ತಿರುಗಾಡಬಯಸುವ ಮನಸ್ಸು ಹೊಂದಿರುವುದರಿಂದ ತುಲಾ ರಾಶಿಯವರಿಗೆ ಹೊಂದುತ್ತಾರೆ. ಮೇಷ, ಕರ್ಕ, ಮಕರ ರಾಶಿಯವರೊಂದಿಗೂ ತುಲಾ ರಾಶಿಯ ಮಂದಿ ಒಕೆಯಾದರೂ, ಅಷ್ಟಾಗಿ ಉತ್ತಮ ಸಂಬಂಧ ಹೊಂದಿರಲು ಸಾಧ್ಯವಿಲ್ಲ. ಆದರೆ ತಮ್ಮದೇ ತುಲಾ ರಾಶಿಯವರನ್ನೇ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡರೂ ಕೂಡಾ ತುಲಾ ರಾಶಿಯ ಮಂದಿ ನೆಮ್ಮದಿಯಿಂದ ಸಮೃದ್ಧ ಜೀವನ ನಡೆಸಬಹುದು.
ವೃಶ್ಚಿಕ- ವೃಶ್ಚಿಕ ರಾಶಿ ಮಂದಿಯ ಕಣ್ಣಿನಲ್ಲಿ ಅಪಾರ ಕಾಂತಿಯಿರುತ್ತದೆ. ಅವರು ನೋಟ ತೀಕ್ಷ್ಣವಾಗಿರುತ್ತದೆ. ಇವರು ತಮ್ಮ ಸಂಗಾತಿಗಳನ್ನು ತುಂಬ ಪ್ರೀತಿಸಬಲ್ಲರು. ಪ್ರೀತಿಸುವಷ್ಟೇ ತೀಕ್ಷ್ಣವಾಗಿ ಇವರಿಗೆ ದ್ವೇಷಿಸುವುದೂ ಗೊತ್ತು. ವೃಶ್ಚಿಕ ರಾಶಿಯ ಮಂದಿಗೆ ಸೂಕ್ತವಾಗುವುದು ಕರ್ಕ ಹಾಗೂ ಮೀನ ರಾಶಿಯ ಮಂದಿ. ಈ ರಾಶಿಯ ಮಂದಿ ತುಂಬ ಶಾಂತಿಯುತ ಜೀವನ ಪಡೆಯುವುದು ಬಯಸುವುದರ ಜೊತೆಗೆ ಆ ಬಗ್ಗೆ ತಮ್ಮ ಶಕ್ತಿ ಮೀರಿ ಪ್ರಯತ್ನವನ್ನೂ ಮಾಡುತ್ತಾರೆ. ಆದರೆ ಇನ್ನೊಬ್ಬರನ್ನು ಟೀಕಿಸುವ ಮನೋಧರ್ಮ ಬಿಟ್ಟರೆ ತಮ್ಮ ಸಂಗೀತಿಯೊಡನೆ ಹೆಚ್ಚು ಸಂತೋಷ ಪಡೆಯಬಹುದು. ವೃಷಭ ರಾಶಿಯ ಮಂದಿಯ ಜೊತೆಗೆ ವೃಶ್ಚಿಕ ರಾಶಿಯವರಿಗೆ ಉತ್ತಮ ಹಾಗೂ ತುಂಬ ಪವರ್ ಫುಲ್ ಆದ ಸಂಬಂಧ ಸಾಧ್ಯವಿದೆ. ಇದಲ್ಲದೆ ತಮ್ಮದೇ ರಾಶಿಯ ಮಂದಿಯ ಜೊತೆಗೂ ಇವರು ನೆಮಮ್ದಿಯ ಬಾಳು ಬದುಕಬಹುದು. ಮೇಷ ರಾಶಿಯ ಜೊತೆಗೂ ಬೌಧ್ಧಿಕ, ಸ್ಮಾರ್ಟ್ ಆದ ಜೀವನ ಸಾಧ್ಯ. ಇವರಿಬ್ಬರೂ ಒಬ್ಬರನ್ನೊಬ್ಬರು ಹಿತವಾಗಿ ಅರಿತು, ಪ್ರೀತಿಯ ಬಾಳ್ವೆ ನಡೆಸಲು ಸಾಧ್ಯವಿದೆ. ಆದರೆ ಮಿಥುನ ರಾಶಿಯ ಮಂದಿಯ ಜೊತೆಗೆ ವೃಶ್ಚಿಕ ರಾಶಿಯ ಮಂದಿಗೆ ಜೀವನ ಕಷ್ಟವಾಗಬಹುದು. ಇಬ್ಬರಿಗೂ ತಮ್ಮ ತಮ್ಮ ನಿಲುವುಗಳಲ್ಲೇ ಭಿನ್ನಾಭಿಪ್ರಾಯ ಬರಬಹುದು.
ಧನು- ಪ್ರಾಮಾಣಿಕ ಹಾಗೂ ಮುಗ್ಧ ಸ್ವಭಾವದ ಇವರು ಸ್ವಲ್ಪ ಮಕ್ಕಳಂತೆಯೇ ಮನಸ್ಸು ೊಂದಿದವರು. ಬದುಕಿನ ಬಗ್ಗೆ ಸಕಾರಾತ್ಮಕ ದೋರಣೆ ಇರುವ ಇವರು ತಮಾಷೆಯಾಗಿರಲು ಬಯಸುತ್ತಾರೆ. ಯಾವಾಗಲೂ ಹುರುಪಿನಿಂದಲೇ ವರ್ತಿಸುವ ಇವರು ಕೆಲವೊಮ್ಮೆ ಈ ಹುರುಪು ಕೆಟ್ಟ ಮೂಡ್‌ನೊಂದಿಗೆ ಕೊನೆಗೊಳ್ಳುತ್ತದೆ. ಇದರಿಂದ ಇವರು ಬೇಗನೆ ತಪ್ಪು ತಿಳಿದುಕೊಳ್ಳುತ್ತಾರೆ. ಹೀಗಾಗಿ ಈ ರಾಶಿಯಲ್ಲಿ ಜನಿಸಿದವರಿಗೆ ಮೇಷ ಹಾಗೂ ಸಿಂಹ ರಾಶಿಯವರು ಹೊಂದುತ್ತಾರೆ. ಬದುಕನ್ನು ತುಂಬ ಇಂಟರೆಸ್ಟಿಂಗ್ ಆಗಿ ಅನುಭವಿಸುವ ಗುಣ ಇವರಲ್ಲಿರುವುದರಿಂದ ಈ ಎರಡು ರಾಶಿಯ ಮಂದಿ ಇವರಿಗೆ ಉತ್ತಮ ಜೋಡಿಯಾಗಬಲ್ಲರು. ಮಿಥುನ ರಾಶಿಯ ಮಂದಿಯೂ ಕೂಡಾ ಧನು ರಾಶಿಯ ಮಂದಿಗೆ ಉತ್ತಮ ಸಾಂಗತ್ಯ ನೀಡಬಲ್ಲರು. ಮಕರ, ಕನ್ಯಾ ಅಥವಾ ವೃಷಭ ರಾಶಿಯವರ ಜೊತೆಗೂ ಇವರ ಸಂಬಂಧ ಚೆನ್ನಾಗಿರಬಲ್ಲದು.
ಮಕರ- ಮಕರ ರಾಶಿಯ ಮಂದಿ ಯಾವಾಗಲೂ ಹೊರಜಗತ್ತಿಗೆ ತಮ್ಮತನ ಪ್ರದರ್ಶಿಕೆಯ ಸ್ವಭಾವದವರಲ್ಲ. ಎಲ್ಲೇ ಹೋದರೂ ತಮ್ಮಷ್ಟಕ್ಕೆ ತಾವಿದ್ದುಕೊಂಡು ಸುತ್ತಲ ಸೌಂದರ್ಯ ಸವಿಯುವುದು ಅವರ ರೂಢಿ. ಸ್ವಲ್ಪ ನಾಚಿಕೆಯ ಸ್ವಭಾವ ಇವರದಾಗಿದ್ದು, ಸ್ವಲ್ಪ ಅಂತರ್ಮುಖಿಗಳು. ಈ ಎಲ್ಲಾ ಗುಣಗಳಿರುವ ಕಾರಣ ಮಕರ ರಾಶಿಯ ಮಂದಿಗೆ ಕನ್ಯಾ ಹಾಗೂ ವೃಷಭ ರಾಶಿಯ ಮಂದಿ ಸೂಕ್ತವಾಗಿ ಹೊಂದುತ್ತಾರೆ. ವೃಷಭ ಹಾಗೂ ಮಕರ ರಾಶಿಯವರಿಬ್ಬರೂ ತುಂಬ ಪ್ರಾಕ್ಟಿಕಲ್ ಆಗಿರುವುದರಿಂದ ಒಂದೇ ತರಹದ ನಡವಳಿಕೆಯಿರುವುದರಿಂದ ಉತ್ತಮ ಖಾಸಗಿ ಜೀವನ ಪಡೆಯಬಹುದು. ಕನ್ಯಾ ರಾಶಿಯ ಮಂದಿಯೂ ಕೂಡಾ ಪ್ರಾಕ್ಟಿಕಲ್ ವ್ಯಕ್ತಿತ್ವ ಹೊಂದಿರುವುದರಿಂದ ಇವರೂ ಕೂಡಾ ಮಕರ ರಾಶಿಯವರ ಜೊತೆಗೆ ಹೊಂದಿಕೆಯಾಗುತ್ತಾರೆ. ಮಕರ ರಾಶಿಯ ಮಂದಿ ಪ್ರೀತಿ ಹಾಗೂ ರೊಮ್ಯಾನ್ಸ್ಗೆ ಯಾವತ್ತೂ ಕೊರತೆ ಮಾಡಲ್ಲ. ಹೀಗಾಗಿ ಇವರು ಕರ್ಕ, ತುಲಾ ಹಾಗೂ ಮೇಷ ರಾಶಿಯ ಮಂದಿಯ ಮನವನ್ನೂ ಕೂಡಾ ಗೆಲ್ಲಬಲ್ಲರು ಹಾಗೂ ಅದನ್ನು ಹಾಗೆಯೇ ನಿಭಾಯಿಸಬಲ್ಲರು ಕೂಡಾ. ಮಕರ ಹಾಗೂ ಕುಂಭ ರಾಶಿಯ ಮಂದಿಯ ಸಾಂಗತ್ಯ ಬಹುಕಾಲ ಬಾಳುವಂಥದ್ದು, ಯಾಕೆಂದರೆ ಇಬ್ಬರೂ, ತುಂಬ ರಿಯಲಿಸ್ಟಿಕ್ ಹಾಗೂ ಪ್ರಾಕ್ಟಿಕಲ್ ಮನೋಭಾವದವರು.
ಕುಂಭ- ಕುಂಭ ರಾಶಿಯ ಮಂದಿ ತುಂಬ ಫ್ರೆಂಡ್ಲೀ ಸ್ವಭಾವ ಹೊಂದಿರುವವರು. ಯಾರ ಜೊತೆಗಾದರೂ ತುಂಬ ಗೆಳೆತನದ ಸಲುಗೆಯಿಂದ ವ್ಯವಹರಿಸಬಲ್ಲರು. ತಮ್ಮ ಸ್ವಾತಂತ್ರ್ಯವನ್ನೇ ಪ್ರೀತಿಸುವ ಅವರು ಕೆಲವೊಮ್ಮೆ ಬಹುಬೇಗನೆ ತಮ್ಮ ಮೂಡ್ ಕೆಡಿಸಿಕೊಳ್ಳುತ್ತಾರೆ. ಆಗ ತಾವೊಬ್ಬರೇ ಏಕಾಂತದಲ್ಲಿರುವ ಅವರು ತಕ್ಷಣ ಮೂಡ್ ಸರಿಮಾಡಿಕೊಂಡು ಗುಂಪಿನಲ್ಲಿ ಬೆರೆಯುತ್ತಾರೆ. ಸಾಂಪ್ರದಾಯಿಕ ಚೌಕಟ್ಟಿಗೆ ಬಲಿ ಬೀಳುವವರು ಇವರಲ್ಲ. ಕುಂಭ ರಾಶಿಯ ಮಂದಿ ಯಾವಾಗಲೂ ಪ್ರೀತಿಯ ತೋರ್ಪಡಿಕೆಯನ್ನೂ ಕೊಂಚ ಬಯಸುತ್ತಾರೆ. ಪ್ರೀತಿಯ ಅಪ್ಪುಗೆ, ಒಂದು ಸಿಹಿಮುತ್ತು ಇವೆಲ್ಲ ಅವರಿಗಿಷ್ಟ. ಹೀಗಾಗಿ ಇವರಿಗೆ ಮಿಥುನ, ತುಲಾ ರಾಶಿಯ ಮಂದಿ ತುಂಬ ಹೊಂದಿಕೆಯಾಗುತ್ತಾರೆ. ಆದರೆ ವಿಚಿತ್ರವೆಂದರೆ ಕುಂಭ ರಾಶಿಯ ಮಂದಿ ಯಾವಾಗಲೂ ವ್ಯವಸ್ಥೆಯ ವಿರುದ್ಧ ದಿಕ್ಕಿನಲ್ಲಿ ಹೋಗಲು ಹೇಸದವರಾದರೆ, ತುಲಾ ರಾಶಿಯ ಮಂದಿ ಎಲ್ಲರನ್ನೂ ಒಲಿಸಿಕೊಳ್ಳುವ ಮನಸ್ಥಿತಿಯವರು. ಆದರೂ, ಇವರಿಬ್ಬರ ಗುರಿ, ಮನೋಭಾವ ಎಲ್ಲ ಒಂದೇ. ಮಿಥುನ ರಾಶಿಯ ಮಂದಿಯೂ ಕುಂಭರಾಶಿಯವರಂತೆಯೇ ವಾಚಾಳಿಗಳಾದ್ದರಿಂದ ಇಬ್ಬರ ನಡುವೆ ಸಾಂಸಾರಿಕ ಸಂಬಂಧ ಉತ್ತಮವಾಗಿರುತ್ತದೆ. ಕುಂಭ ಹಾಗೂ ಸಿಂಹ ರಾಶಿಯ ಜೋಡಿ ಕೂಡಾ ಉತ್ತಮವಾಗಿರಬಲ್ಲದು. ಇವರು ಜೋಡಿಗಳಾದರೆ, ಇಬ್ಬರೂ ಸಮಸ್ಯೆಗಳನ್ನು ಸರಳವಾಗಿ ಪರಿಹರಿಸಬಲ್ಲರು.
ಮೀನ- ಮೀನ ರಾಶಿಯ ಮಂದಿ ಎಲ್ಲಾ ರಾಶಿಯ ಮಂದಿಯ ಗುಣ ಲಕ್ಷಣಗಳನ್ನೂ ಹೊಂದಿರುತ್ತಾರೆ. ಮೀನರಾಶಿಯಲ್ಲಿ ಎರಡು ಡಿಫರೆಂಟ್ ಗುಣದ ವ್ಯಕ್ತಿಗಳಿರುತ್ತಾರೆ. ಒಂದು ಗುಣದವರು ಪ್ರಪಂಚವೇ ಹೀಗೆ ಎಂದುಕೊಂಡು ಪ್ರಪಂಚದ ಓರೆಕೋರೆಗಳೊಂದಿಗೆ ಹೊಂದಿಕೊಂಡು ಹೋಗುವವರಾದರೆ, ಮತ್ತೊಂದು ಬೆಯವರು, ಓರೆಕೋರೆಗಳ ವಿರುದ್ಧ ಸಿಡಿದೇಳುವವರು. ತುಂಬ ಎಮೋಶನಲ್ ಹಾಗೂ ಸೆನ್ಸಿಟಿವ್ ಆಗಿರುವ ಮಂದಿ ಇವರು. ಜೀವನದಲ್ಲಿ ಸಂಘರ್ಷಗಳನ್ನು ಎದುರಿಸುವವರು ಖಂಡಿತಾ ತಮ್ಮ ಜೀವನದಲ್ಲಿ ಅತ್ಯುನ್ನತ ಪದವಿಗೆ ತಲುಪುತ್ತಾರೆ. ಇವರ ಗುಣಗಳಿಗೆ ಬಹುಬೇಗ ಹೊಂದಿಕೆಯಾಗುವ ಮಂದಿ ಕರ್ಕ ಹಾಗೂ ವೃಶ್ಚಿಕ ರಾಶಿಯವರು. ಕರ್ಕ ರಾಶಿಯ ಮಂದಿಯ ಜೊತೆಗೆ ಮೀನ ರಾಸಿಯವರು ಉತ್ತಮ ದಾಂಪತ್ಯ ನಡೆಸಬಲ್ಲರು. ಹಾಗೆಯೇ ವೃಷ್ಚಿಕ ರಾಶಿಯವರ ಜೊತೆಗೂ ಕೂಡಾ. ಮೀನ ರಾಶಿಯವರಿಗೆ ಕನ್ಯಾ ರಾಶಿಯ ಮಂದಿಯೂ ಕೂಡಾ ಕೊಂಚ ಮಟ್ಟಿಗೆ ಹೊಂದಿಕೆಯಾಗುತ್ತಾರೆ. ಮೊದಮೊದಲು ಈ ಇಬ್ಬರಲ್ಲಿ ಅಂತಹ ಹೊಂದಿಕೆ ಕಂಡುಬರದಿದ್ದರೂ ಆಮೇಲೆ ಇವರ ಜೋಡಿ ಬಲಗೊಳ್ಳುತ್ತದೆ. ಮೀನ ರಾಶಿಯವರಿಗೆ ಮೀನ ರಾಶಿಯ ಮಂದಿಯೇ ಉತ್ತಮ ಜೋಡಿಯಾಗಬಲ್ಲರು. ಯಾಕೆಂದರೆ ಇವರಿಬ್ಬ ನಡುವಿನ ಭಾವುಕತೆ, ಒಬ್ಬರನ್ನೊಬ್ಬರು ಅರಿಯುವುದು ಎಲ್ಲವೂ ಉತ್ತಮ ಸಂಬಂಧ ಸೃಷ್ಟಿಸಬಲ್ಲದು.
Subscribe to:
Post Comments (Atom)
Appreciate your observations Deepak. I am Chandrakanth, Chief of BJP Karnataka Information Technology (IT) Cell. I invite you to join our team of professionals as an Active Member. People like you can definitely make a huge difference for the party. Do call me on 9036005901 so that we can setup a meeting between us.
ReplyDelete